ಪದಶ್ರೀ : ಕನ್ನಡದ ಮೊದಲ ಆಂಡ್ರಾಯ್ಡ್ ಕ್ರಾಸ್‌ವರ್ಡ್/ಪದಬಂಧ ಆ್ಯಪ್

ಪದಶ್ರೀ : ಕನ್ನಡದ ಮೊದಲ ಆಂಡ್ರಾಯ್ಡ್ ಕ್ರಾಸ್ ವರ್ಡ್/ಪದಬಂಧ ಆ್ಯಪ್

ಕನ್ನಡದಲ್ಲಿ ಪದಗಳ ಆಟ

ನೀವು ಹೆಚ್ಚಾಗಿ ಪತ್ರಿಕೆಯಲ್ಲಿ ಆಡುವ ಪ್ರಸಿದ್ಧ ಕನ್ನಡ ಕ್ರಾಸ್‌ವರ್ಡ್ ಈಗ ಆಂಡ್ರಾಯ್ಡಿನಲ್ಲಿ ಲಭ್ಯ!!. ಮೂಲತಃ ಕನ್ನಡ ಅಥವಾ ಇತರ ಯಾವುದೇ ದೇವನಾಗರಿ ಭಾಷೆಗೆ ನಿರ್ಮಿಸಲಾದ ಏಕೈಕ ಕ್ರಿಯಾತ್ಮಕ ಕ್ರಾಸ್‌ವರ್ಡ್ ಇದಾಗಿದೆ. ನೀವು ಪ್ರಯಾಣಿಸುತ್ತಿರುವಾಗ, ವೈದ್ಯರ ಚಿಕಿತ್ಸಾಲಯದಲ್ಲಿ ಕಾಯುತ್ತಿರುವಾಗ ಅಥವಾ ನಿದ್ದೆ ಮಾಡಲು ಸಾಧ್ಯವಾಗದಿದ್ದಾಗಲೂ ಕಾಲಹರಣಕ್ಕೆ ಅತ್ಯುತ್ತಮ ಸಹಕಾರಿ!

ವೈಶಿಷ್ಟ್ಯ :
➕ ಪ್ರತಿದಿನ ಹೊಸ ಆಟ
➕ ಕ್ರಿಯಾತ್ಮಕ (Dynamic)
➕ ಸರಳ ಆದರೆ ಗೂಡಾರ್ಥಿತ ಸುಳಿವುಗಳು
➕ ದಿನಪತ್ರಿಕೆಗಳಿಗೆ ಹೋಲಿಸಿದರೆ ಕನಿಷ್ಠ ಪುನರಾವರ್ತಿತ ಪದ
➕ ಪೂರ್ವ-ದಿನಗಳ ಆಟಕ್ಕೆ ಅವಕಾಶ (ಗರಿಷ್ಠ ೭)
➕ ಇನ್ನಾವುದೇ ಅನವಶ್ಯಕ ತಿಣುಕಾಟವಿಲ್ಲದೆ ಆಟವು ಒಂದೇ ಪರದೆಗೆ ಸೀಮಿತ
➕ ಈಗಾಗಲೇ ಸ್ಥಾಪಿಸಿರುವ ಅಕ್ಷರಗಳ ಶೇಕಡಾವಾರು ಪ್ರಗತಿಯ ಸೂಚನೆ
➕ ತಪ್ಪು ಉತ್ತರದ ಸುಳಿವು (ಗರಿಷ್ಠ ೩)
➕ ಆಯ್ಕಾತ್ಮತ ವರ್ಣವಿನ್ಯಾಸಗಳು (ಪ್ರಾರಂಭಿಕವಾಗಿ ೪)

ನ್ಯೂನತೆ :
- ಸರಿ ಉತ್ತರಗಳ ಸುಳಿವು ಇಲ್ಲ
- ಅಂತರ್ಜಾಲ ಸಕ್ರಿಯತೆ ಅನಿವಾರ್ಯ (ಹೊಸ ಆಟಕ್ಕಾಗಿ)

ಭವಿಷ್ಯ ಕಾರ್ಯಸೂಚಿ
* ಸ್ನೇಹಿತರ ಸಹಾಯ ಕೋರಿಕೆ
* ಪ್ರತಿ-ಆಟ/ಕ್ರೋಢೀಕೃತ ಅಂಕಿ-ಅಂಶ

ಸಾಮ್ಯ ಪದಗಳು:
ಕನ್ನಡದಲ್ಲಿ ಕ್ರಾಸ್ ವರ್ಡ್, ಕನ್ನಡದಲ್ಲಿ ಪದಬಂಧ , ಕನ್ನಡದಲ್ಲಿ ಬೋರ್ಡ್ ಗೇಮ್, ಪದಬಂಧ, ತರಂಗ ಶಬ್ದಶಿಲ್ಪ, ವಿಜಯವಾಣಿ ಪದಾವಳಿ,ತುಷಾರ ಪದಲಾಸ್ಯ


***********ಗಣಿತ***********
➕ ಎರಡರಿಂದ ಭಾಗಿಸಿದರೆ ಶೇಷ ಉಳಿಸುವ ಸಂಖ್ಯೆ
➕ ಉದ್ದ,ಅಗಲ ಮತ್ತು ಆಳದ ವಿಸ್ತಾರ
➕ ತಳಕ್ಕೆ ಸಮಕೋನದಲ್ಲಿರುವ ರೇಖೆ
➕ ಭಾಸ್ಕರಾಚಾರ್ಯನ ಮಗಳು ಮತ್ತು ಆತ ಬರೆದದ ಪುಸ್ತಕ
➕ ಹಕ್ಕಿಗಳನ್ನೂ ಎಣಿಸಬಲ್ಲಜ್ಞ
➕ ಗುಣಾಕಾರ ಮಾಡಿದಾಗ ಸಿಗುವ ಸಂಖ್ಯೆ (ಗಣಿತದಿಂದ)
➕ ಗುಣಾಕಾರ ಮಾಡುವ ಸಂಖ್ಯೆ
➕ ರೇಖಾಗಣಿತದಲ್ಲಿ ಸಿಗುವ ಮೂರು ಕೋನಗಳ ಆಕೃತಿ

***********ವೈದ್ಯಕೀಯ**********
➕ ಧನಿಕನಿಗೂ ಇದೆಯಂತೆ ರಕ್ತನಾಳ
➕ ಐದು ರೀತಿಯ ಚಿಕಿತ್ಸೆ ಕ್ರಿಯೆ
➕ ಇಡಾ ಪಿಂಗಳ ನಾಡಿಗಳ ನಡುವಣ ನಾಡಿ
➕ ಮನುಷ್ಯ ದೇಹದ ಮೂಲ ಆಧಾರ (ವೈಜ್ಞಾನಿಕವಾಗಿ)
➕ ಆಂಗ್ಲದ ಸ್ಪೇಸ್ (ವೈಜ್ಞಾನಿಕವಾಗಿ)
➕ ಅಣು ವಿಭಜನೆಯಿಂದಾದ ಕಿರಣಗಳ ಬಿಡುಗಡೆ (ವೈಜ್ಞಾನಿಕವಾಗಿ)
➕ ಆಂಗ್ಲದ ಅಬಾರ್ಷನ್ (ವೈಜ್ಞಾನಿಕವಾಗಿ)
➕ ಹಣ್ಣುಗಳ ವೈಜ್ಞಾನಿಕ ಅಧ್ಯಯನ ಮಾಡುವವ

***********ಪೌರಾಣಿಕ**********
➕ ಬ್ರಹ್ಮನು ಚಂದ್ರನನ್ನು ಶಿವನಿಗೂ,ನಕ್ಷತ್ರಗಳಿಗೂ ಭಾಗಮಾಡಿದ ಸ್ಥಳ
➕ ಅಹವಾಲು ಹೇಳುತ್ತಿದ್ದಾಳೆ ಗೌತಮ ಋಷಿಯ ಪತ್ನಿ
➕ ಲಂಕೆಗೆ ಸೇತುವೆ ಕಟ್ಟಿದವ
➕ ಮೀನನ್ನು ನೆನಪಿಸಿದ ವ್ಯಾಸಮುನಿಯ ತಾಯಿ
➕ ನಿಂತಲ್ಲೇ ಕಂಡಿದ್ದು ಏಳು ಆಧೋಲೋಕಗಳಲ್ಲಿನ ಒಂದು ಲೋಕ
➕ ಪರಶುರಾಮನ ತಂದೆ
➕ ಶಿಶುಪಾಲನ ರಾಜ್ಯ
➕ ಕೋಪಕ್ಕೆ ಹೆಸರಾದ ಒಬ್ಬ ಮುನಿ
➕ ಕುಬೇರನ ರಾಜಧಾನಿ
➕ ಸುಗ್ರೀವನ ಹೆಂಡತಿ
➕ ಯದು ವಂಶದ ಈ ಅರಸನೇ ದೇವಕಿಯ ತಂದೆ
➕ ಅಗಸ್ತ್ಯ ಮುನಿ ಜೀರ್ಣಿಸಿಕೊಂಡ ಒಬ್ಬ ರಾಕ್ಷಸ
➕ ಕರ್ಣನ ಸಾರಥಿಯಾಗಿದ್ದ ಮದ್ರ ದೇಶದ ಅರಸ
➕ ಬಲಿರಾಜನ ಇನ್ನೊಂದು ನಾಮ
➕ ಶ್ರೀರಾಮನ ಸೋದರ ಭರತನ ಹಿರಿಯ ಮಗ
➕ ಸತ್ಯವತಿಯ ತಂದೆ ಒಬ್ಬ ಬೆಸ್ತರವ
➕ ನಳರಾಜನ ದೇಶ
➕ ಪಕ್ಷಿರೂಪದಲ್ಲಿದ್ದ ಒಬ್ಬ ಋಷಿ
➕ ನೊಣವನ್ನು ಕೊಂದ ಒಬ್ಬ ಋಷಿ
➕ ಮಿಥ್ಯವೇನಲ್ಲ ಪೂರ್ವದಲ್ಲಿ ಇದು ಜನಕನ ರಾಜಧಾನಿ
➕ ಪೃಥ್ವಿ ಹಾಗೂ ಯಮಲೋಕದ ನಡುವೆ ಹರಿಯುವ ನದಿ

***********ದೇವರ ನಾಮ**********
➕ ಸೂರ್ಯ (ಆಕಾಶದಲ್ಲಿ ಚಲಿಸುವನಾಗಿ)
➕ ಕೃಷ್ಣ (ದ್ವಾರಕೆಯ ಒಡೆಯನಾಗಿ)
➕ ಚಂದ್ರ (ಹತ್ತು ಕುದುರೆಯ ರಥವುಳ್ಳವನಾಗಿ)
➕ ಹರಿಶ್ಚಂದ್ರನ ಮಗ ಅಥವಾ ವಿಷ್ಣು (ಕೆಂಪು ಕಣ್ಣುಳ್ಳವನಾಗಿ)
➕ ನರಕಾಸುರನ ಇನ್ನೊಂದು ನಾಮ (ಭೂದೇವಿಯ ಮಗನಾಗಿ)
➕ ಬೀಗುವವರನ್ನು ಕಾಡುವ ಭೈರವ (ಭಯಂಕರ ರೂಪವುಳ್ಳವನಾಗಿ)
➕ ಶಿವ (ಆನೆಯ ಚರ್ಮ ಉಟ್ಟವನಾಗಿ)
➕ ಗರುಡ (ವಿನತಾದೇವಿಯ ಮಗನಾಗಿ)
➕ ಚಂದ್ರ (ಜಿಂಕೆಯ ಗುರುತು ಹೊಂದವನಾಗಿ)
➕ ಶಿವ (ದೋಷ ಹೊಂದಿಲ್ಲದವನಾಗಿ)
➕ ಕೃಷ್ಣ (ಬೆಣ್ಣೆ ಕದ್ದವನಾಗಿ)
➕ ಗಣೇಶನ ಅತಿ ವಿರಳ ನಾಮ (ಆನೆಯ ಮುಖ ಹೊಂದವನಾಗಿ)
➕ ಚಂದ್ರ (ತಂಪು ಉಳ್ಳವನಾಗಿ)
➕ ಮನ್ಮಥ (ಸಾವಿರ ಕಣ್ಣುಳ್ಳವನಾಗಿ)
➕ ಅಗ್ನಿ (ವಾಯವಿನ ಮಿತ್ರನಾಗಿ)
➕ ಶಿವ (ಅಕ್ಕರೆ-ಆಕರ್ಷಣೆ ಇಲ್ಲದವನಾಗಿ)
➕ ಅಗಸ್ತ್ಯ (ಕಲಶದಲ್ಲಿ ಹುಟ್ಟಿದವನಾಗಿ)
➕ ಷಣ್ಮುಖ (ಅಗ್ನಿಯ ಅಂಶ ಹೊಂದವನಾಗಿ)
➕ ಕೃಷ್ಣ (ಜಗತ್ತನ್ನು ಹೊಟ್ಟೆಯಲ್ಲಿ ಹೊಂದವನಾಗಿ)
➕ ಶಿವ (ನೀಲ ಕಂಠವುಳ್ಳವನಾಗಿ)
➕ ವಿಷ್ಣು (ಭಾರವನ್ನು ಹೊತ್ತವನಾಗಿ)
➕ ಮುನಿ (ತಪಸ್ಸು ಮಾಡುವವನಾಗಿ)
➕ ಶಿವ (ಪ್ರಳಯ ಮಾಡುವವನಾಗಿ)
➕ ಶಿವ (ತಲೆಬುರುಡೆ ಕೈಯಲ್ಲಿ ಹಿಡಿದಿರುವನಾಗಿ)
➕ ಶಿವ (ಎತ್ತಿನ ಮೇಲೇರಿದವನಾಗಿ)
➕ ಅಗ್ನಿ (ಹೊಗೆಯ ನಿಶಾನೆ ಹೊಂದವನಾಗಿ)
➕ ಬ್ರಹ್ಮ (ಹಂಸದಲ್ಲಿ ವಿಹರಿಸುವನಾಗಿ)
➕ ಮನ್ಮಥ (ಮೊಸಳೆಯ ಗುರುತನ್ನು ಹೊಂದವನಾಗಿ)
➕ ಷಣ್ಮುಖ (ತಾರಕನನ್ನು ಗೆದ್ದವನಾಗಿ)
➕ ಕಾಮದೇವ (ಮೀನಿನ ಗುರುತಿನ ಧ್ವಜ ಹೊಂದವನಾಗಿ)
➕ ಕೃಷ್ಣ (ಪವಿತ್ರ ಪಾದವುಳ್ಳವನಾಗಿ)
➕ ಶಿವ (ಐದು ಮುಖದ ರುದ್ರಾಕ್ಷನಾಗಿ)
➕ ಕುಬೇರ (ಸಂಪತ್ತಿನ ಒಡೆಯನಾಗಿ)
➕ ಮಹಾದೇವ (ಯಾವಾಗಲೂ ಸುಖೀಯಿರುವನಾಗಿ)
➕ ಹಿಮಾಲಯ (ಪರ್ವತಗಳ ಒಡೆಯನಾಗಿ)
➕ ಇಂದ್ರ (ದೇವತೆಗಳ ರಕ್ಷಕನಾಗಿ)
➕ ಸೂರ್ಯ (ಕಿರಣ ಹೊಂದವನಾಗಿ)
➕ ಶಿವ (ಡೊಳ್ಳು ಹೊಂದವನಾಗಿ)
➕ ಸಮುದ್ರ (ನೀರಿನ ಒಡೆಯನಾಗಿ)
➕ ಶಿವ (ಹತ್ತು ತೋಳುಗಳುಳ್ಳವನಾಗಿ)
➕ ಸಮುದ್ರ (ನೀರನ್ನು ಹುದುಗಿಕೊಂಡಿರುವನಾಗಿ)
➕ ಚಂದ್ರ (ಇರುಳು ಕರ್ತೃನಾಗಿ)
➕ ಕೃಷ್ಣ (ಮೊರೆಹೊಕ್ಕವನ ಮನೋರಥ ಪೂರ್ಣ ಮಾಡುವನಾಗಿ)
➕ ವಿಷ್ಣು (ಭೂಮಿಯನ್ನು ಹೊತ್ತವನಾಗಿ)
➕ ತುಂಬಾ ಕಠೋರನಾದ ಪರಶುರಾಮ (ಕೊಡಲಿ ಹೊಂದವನಾಗಿ)
➕ ಮನುಷ್ಯ (ಮರಣಶೀಲನಾಗಿ)
➕ ಯಮ (ಸತ್ತವರ ಒಡೆಯನಾಗಿ)
➕ ಇಂದ್ರ (ನಮುಚಿ ಎಂಬ ದಾನವನನ್ನು ಕೊಂದವನಾಗಿ)
➕ ಅನಿರುದ್ಧ (ಮನ್ಮಥನ ಮಗನಾಗಿ)
➕ ಜನಕರಾಜ (ನಿಮಿಯ ಮಗನಾಗಿ)
➕ ಬುಧ (ಶಶಿಯ ಸುತನಾಗಿ)
➕ ಶಿವ (ಹೋರಿಯ ಗುರುತನ್ನು ಹೊಂದವನಾಗಿ)
➕ ಕೃಷ್ಣ (ಗೋಶಾಲೆಯ ಒಡೆಯನಾಗಿ)
➕ ಕುಬೇರ (ಯಕ್ಷನ ಒಡೆಯನಾಗಿ)
➕ ಮನ್ಮಥ (ಗೆಳೆತನ ಮಾಡಿಸುವನಾಗಿ)
➕ ವಿಷ್ಣುವಿನ ಅತಿ ವಿರಳ ನಾಮ (ಬಿಲ್ಲನ್ನು ಹೊಂದವನಾಗಿ)
➕ ಮನ್ಮಥ (ರತಿಯ ರಮಣನಾಗಿ)
➕ ಕೃಷ್ಣ (ಕಪ್ಪು ಕಾಯದವನಾಗಿ)
➕ ಸುಬ್ರಮಣ್ಯ (ಆರು ವದನ ಹೊಂದವನಾಗಿ)
➕ ಬುದ್ಧ (ಕಾಮವನ್ನು ಜಯಿಸಿದವನಾಗಿ)
➕ ಬ್ರಹ್ಮ (ಕಮಲದಿಂದ ಹುಟ್ಟಿದವನಾಗಿ)
➕ ಭೀಷ್ಮ (ಶಾಂತನುವಿನ ಮಗನಾಗಿ)
➕ ಮನ್ಮಥ (ದೇಹವಿಲ್ಲದವನಾಗಿ)
➕ ಕಠೋರನಂತಿರುವ ಪರಶುರಾಮ (ಕೊಡಲಿ ಹೊಂದವನಾಗಿ)
➕ ವಿನಾಯಕ (ಗಣಗಳ ಒಡೆಯನಾಗಿ)
➕ ಸೂರ್ಯ (ಹಗಲಿನ ಒಡೆಯನಾಗಿ)
➕ ಶಿವ (ನಾಟ್ಯ ಪ್ರವೀಣನಾಗಿ)
➕ ಅರ್ಜುನ (ಇಂದ್ರನ ಮಗನಾಗಿ)
➕ ಅಗ್ನಿ (ಎಲ್ಲವನ್ನೂ ಸ್ವಾಹಿಸುವನಾಗಿ)
➕ ಭೀನಸೇನ (ತೋಳದಂತೆ ಉದರ ಹೊಂದವನಾಗಿ)
➕ ಸೂರ್ಯ (ಸಾವಿರ ಕಿರಣವುಳ್ಳವನಾಗಿ)
➕ ಅರಸ (ಭೂಮಿಯ ಒಡೆಯನಾಗಿ)
➕ ಮಂಗಳ ಗ್ರಹ (ಭೂದೇವಿಯ ಮಗನಾಗಿ)
➕ ಸೂರ್ಯ (ತೀಕ್ಷ್ಣ ಕಿರಣ ಸೂಸುವನಾಗಿ)
➕ ವಿಷ್ಣು (ಮುಖ್ಯ ಪುರುಷನಾಗಿ)
➕ ಚಂದ್ರ (ಹಾಲಿನಂತೆ ಮೈಯುಳ್ಳವನಾಗಿ)
➕ ಸೂರ್ಯ (ತೀಕ್ಷ್ಣ ಅಂಶ ಹೊಂದವನಾಗಿ)
➕ ಭರತ (ಶಕುಂತಲೆಯ ಮಗನಾಗಿ)
➕ ಚಾಣಕ್ಯ (ಚಣಕನ ಸುತನಾಗಿ)
➕ ರಾವಣ (ಅನೇಕ ತೋಳುಗಳುಳ್ಳವನಾಗಿ)
➕ ಶಿವ (ಪ್ರಮಥರ ನಾಥನಾಗಿ)
➕ ಇಂದ್ರನ ಇನ್ನೊಂದು ನಾಮ (ಸ್ವರ್ಗದ ಅಧಿನಾಯಕನಾಗಿ)
➕ ಸಮುದ್ರನ ಇನ್ನೊಂದು ನಾಮ (ನೀರನ್ನು ಹೊಂದವನಾಗಿ)
➕ ವಿಷ್ಣು (ಶೇಷನನ್ನು ಶಯ್ಯೆಯಾಗಿ ಹೊಂದವನಾಗಿ)
➕ ಕಾಮದೇವ (ಹೂವಿನ ಬಾಣ ಹೊಂದವನಾಗಿ)

***********ಆಂಗ್ಲ ಸುಳಿವು**********
➕ ಲಂಗ ಕುಬಸ (ಆಂಗ್ಲದ ಫ್ರಾಕ್)
➕ ಚಾಕ್ಷುಸ ಪ್ರಮಾಣ (ಆಂಗ್ಲದ ಐ ವಿಟ್ನೆಸ್)
➕ ಪುಸ್ತಕದಲ್ಲಿ ತಪ್ಪಾಗಿ ಅಚ್ಚಾದ ಪದಗಳ ಪಟ್ಟಿ (ಆಂಗ್ಲದ ಎರ್ರಾಟ)
➕ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣ
➕ ಸಂಯುಕ್ತ ಧನದಿಂದ ವ್ಯಾಪಾರ ಮಾಡುವ ಸಂಸ್ಥೆ
➕ ಸ್ನಾನಕಾಗಿ ಬಳಸುವ ದೊಡ್ಡ ಪಾತ್ರೆ
➕ ಕಬ್ಬಿಣವನ್ನು ತೂಕಮಾಡುವ ಪರಿಮಾಣ
➕ ಇತ್ತೀಚೆಗೆ ಕಮ್ಮಿಯಾಗಿರುವ ಸಮಾಜವಾದಿ
➕ ಒಂದು ಬಗೆಯ ಮೇಲಂಗಿ
➕ ಪ್ರಯಾಣ ಅನುಮತಿ ಚೀಟಿ

***********ವ್ಯಾಕರಣ**********
➕ ಗೌರವಸೂಚಕವಾಗಿ ನಾಮ ಪದದ ಸಂಭೋದನೆ (ವ್ಯಾಕರಣ)
➕ ಮೊದಲಿನ ವಿಭಕ್ತಿ (ವ್ಯಾಕರಣ)
➕ ಧಾತುವಿಗೆ ಕೃತ್ ಪ್ರತ್ಯಯ ಹಚ್ಚುವುದರಿಂದ ಆದ ಶಬ್ಧ (ವ್ಯಾಕರಣ)
➕ ಬರಹದಲ್ಲಿ ಅಕ್ಷರ ಅಥವಾ ಪದವನ್ನು ಸೇರಿಸಲು ಬಳಸುವ ಚಿಹ್ನೆ (ವ್ಯಾಕರಣ)
➕ ವೇದದ ಅಂಗಗಳು (ಶಿಕ್ಷಾ,ಕಲ್ಪ,ನಿರುಕ್ತ,ಛಂದ,ಜ್ಯೋತಿಷ್ಯ,ವ್ಯಾಕರಣ)
➕ ಕನ್ನಡದಲ್ಲಿ ರೂಢಿಯಲ್ಲಿ ಬಂದ ಸಂಸ್ಕೃತ ಶಬ್ದ (ವ್ಯಾಕರಣದಿಂದ)
➕ ಈತ ಸಂಸ್ಕೃತ ಭಾಷೆಗೆ ಹೆಸರಾದ ವ್ಯಾಕರಣವನ್ನು ಬರೆದವ
➕ ಹೆಸರಿನ ಶಬ್ಧ ವ್ಯಾಕರಣದಲ್ಲಿ ಸೇರಿದೆ

***********ಹಳೆಗನ್ನಡ**********
➕ ಹಿಂಡು ಅಥವಾ ಕಿವುಚು
➕ ಗಳಿಕೆ ಹೆಚ್ಚಿಸಿದಾಗ ದೊರೆತ ಪ್ರಶಂಸೆ
➕ ನಲ್ಮೆಗೆ ಹೇಳಿದ ಸ್ವಾರಸ್ಯಕರವಾದ ಕಥೆ
➕ ನಿಲುಗಡೆಯಲ್ಲಿ ಪಡೆದ ವಿಶ್ರಾಮ
➕ ಬಳಿಕ ಅಥವಾ ಮತ್ತೆ
➕ ಕುಯ್ಯಲು ಆಗದಿದ್ದಾಗ ರೋದಿಸು
➕ ಸಂಪೂರ್ಣವಾಗಿ
➕ ಹೆಜ್ಜೆಯನ್ನು ಅನುಸರಿಸು
➕ ತರುಣಿಗೆ ಮಾಡಿದ ಸಮಾಧಾನ
➕ ಹುಲಿಯನ್ನು ಹೀಗೂ ಕರೆವರು
➕ ಮನಸು ಕೊಡು
➕ ಕೆಳಗೆ ಒತ್ತು ಅಥವಾ ಅದುಮು
➕ ಹಣ್ಣು ಮತ್ತು ಕಾಯಿ ಒಟ್ಟಾಗಿ

***********ಜನಜನಿತವಾಗಿ**********
➕ ಜಂಭದಿಂದ ತಿರುಗಾಡು
➕ ಹಿಂದಿಯ ಕೋಟಿ (ಕನ್ನಡದಲ್ಲಿ ಜನಜನಿತವಾಗಿರುವ)
➕ ಲಕ್ಷ್ಮಿಯ ಒಂದು ಬಿರುದು
➕ ಹಿಂದಿಯ ಬೇಸರ (ಕನ್ನಡದಲ್ಲಿ ಜನಜನಿತವಾಗಿರುವ)
➕ ಮುಸಲ್ಮಾನ ಸಾಧು (ಕನ್ನಡದಲ್ಲಿ ಜನಜನಿತವಾಗಿರುವ)
➕ ಮಹಿಳೆಗೆ ಸಕಾಲದಲ್ಲಿ ತಿಳಿದ ವಿಧಿಯ ಪ್ರಭಾವ
➕ ದುಂದುಗಾರಿಕೆ ಅಥವಾ ವ್ಯರ್ಥವೆಚ್ಚ
➕ ಬದುಕೋದು ಕಲಿಯಬೇಕಾದ 'ಭಿಕ್ಷುಕ'
➕ ಹಿಂದಿಯ ಮಾರುಕಟ್ಟೆ (ಕನ್ನಡದಲ್ಲಿ ಜನಜನಿತವಾಗಿರುವ)
➕ ದಾಂಡಿಗ ಅಥವ ದಪ್ಪದಿರುವವನು
➕ ತಲೆಯ ಮೇಲೆ ಕೇಶವಿಲ್ಲದವ
➕ ದಿನದ ಮೊದಲ ನಗದು ವ್ಯಾಪಾರ
➕ ಹಿಂದಿಯ ಬುಡಮೇಲು (ಕನ್ನಡದಲ್ಲಿ ಜನಜನಿತವಾಗಿರುವ)
➕ ಹೆಚ್ಚಾಗಿ ಎಡಗೈಯನ್ನು ಬಳಸುವವ
➕ ಅಸ್ತವ್ಯಸ್ತ
➕ ಮನೆಯ ಒಡೆಯ
➕ ಹಿಂದಿಯ ಹಿಡಿತ (ಕನ್ನಡದಲ್ಲಿ ಜನಜನಿತವಾಗಿರುವ)
➕ ಗಮನಿಸದೆ ಹೋದ ತಪ್ಪು
➕ ಮುಂಜಾವಿನ ಸ್ತೋತ್ರ
➕ ದೇಶ,ರಾಷ್ಟ್ರ,ರಾಜ್ಯ
➕ ಜಾತಿ ಅಥವಾ ಪಂಗಡ
➕ ಆಂಗ್ಲದ ಹನ್ನೆರಡರ ಘಟಕ (ಕನ್ನಡದಲ್ಲಿ ಜನಜನಿತವಾಗಿರುವ)

***********ಗ್ರಾಮ್ಯ ಭಾಷೆಯಲ್ಲಿ**********
➕ ನಂಬು (ಗ್ರಾಮ್ಯ ಭಾಷೆಯಲ್ಲಿ)
➕ ಹೆರಿಗೆ (ಗ್ರಾಮ್ಯ ಭಾಷೆಯಲ್ಲಿ)
➕ ದಾಹ (ಗ್ರಾಮ್ಯ ಭಾಷೆಯಲ್ಲಿ)
➕ ದೊಡ್ಡ ಮಳೆ (ಗ್ರಾಮ್ಯ ಭಾಷೆಯಲ್ಲಿ)
➕ ದೊಡ್ಡ ಸಿಡುಬು (ಗ್ರಾಮ್ಯ ಭಾಷೆಯಲ್ಲಿ)

***********ಹಳ್ಳಿಗರು ಉಲಿದಂತೆ**********
➕ ಚಲಿಸು ಅಥವಾ ಅಲ್ಲಾಡು
➕ ಎರಡಕ್ಷರದ ಅಧೀನ
➕ ತಲೆಯ ಮೇಲಿನ ನಡುಭಾಗ
➕ ಶಿಬಿರ
➕ ಕೆಂಪು ಅಥವಾ ಕಂದುಬಣ್ಣದ ಮನುಷ್ಯ
➕ ಪಾದರಕ್ಷೆ
➕ ಹಳ್ಳಿಗರು 'ಶಿವ'ನನ್ನು ಕರೆಯುವ ರೀತಿ
➕ ಕಣ್ಣು ಸೋಂಕಿನ ಪ್ರಭಾವ ಇಳಿಸು